RCB Fans Festival: RCB ಕಪ್ ಗೆದ್ರೆ ಹಬ್ಬ ಆಚರಿಸಲು ಸರ್ಕಾರ ಅಧಿಕೃತ ರಜೆ

RCB Fans Festival:) ಐಪಿಎಲ್ ಸೀಸನ್ 18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದು, ಈ ನಡುವೆ ಆರ್ ಸಿಬಿ ಕಪ್ ಗೆದ್ದರೆ ಆ ದಿನವನ್ನು ಆರ್ ಸಿಬಿ ಫ್ಯಾನ್ಸ್ ಹಬ್ಬದ (RCB Fans Festival:) ದಿನವನ್ನಾಗಿ ಘೋಷಣೆ ಮಾಡುವಂತೆ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯಗೆ ವಿಶೇಷ ಪತ್ರ ಬರೆದಿದ್ದಾರೆ.
ಆರ್‌ಸಿಬಿ ಕಪ್ ಗೆದ್ದರೆ ಆದ ದಿನವನ್ನ ʻಆರ್‌ಸಿಬಿ ಫ್ಯಾನ್ಸ್ ಹಬ್ಬʼದ (RCB Fans Festival) ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಪತ್ರ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
Post Comment