ಆರ್ಸಿಬಿಯನ್ನ ‘ಬೆಂಗಳೂರು ಲಯನ್’ ಎಂದು ಬಣ್ಣಿಸಿ ವಿಜಯ್ ಮಲ್ಯ ಭಾವುಕ ಪೋಸ್ಟ್

ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಮಾರಾಟವಾಗಿರುವುದು ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗ ಹೊಸ ಮಾಲೀಕರ ವಶವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನಿಂದ (USL) ಆರ್ಸಿಬಿ ತಂಡದ 100 ಪ್ರತಿಶತ ಪಾಲನ್ನು ಖರೀದಿಸಿದೆ.
ಈ ಬೃಹತ್ ಒಪ್ಪಂದವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು 16,706 ಕೋಟಿ ರೂಪಾಯಿ) ಮೌಲ್ಯದ್ದಾಗಿದೆ.ಆರ್ಸಿಬಿ ಮಾರಾಟ ಬೆನ್ನಲ್ಲೇ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದಾರೆ. RCB ತಂಡವನ್ನು ಮಲ್ಯ 2008ರಲ್ಲಿ 450 ಕೋಟಿ ರೂ.ಗೆ ಖರೀದಿಸಿದ್ದಾಗ , ಆ ಸಮಯದಲ್ಲಿ ಹಲವರು ತನ್ನ ನಿರ್ಧಾರವನ್ನು ಹಾಸ್ಯ ಮಾಡಿದ್ದರು ಎಂದಿದ್ದಾರೆ. ‘ನಾನು ಈ ತಂಡವನ್ನು ಖರೀದಿಸಿದಾಗ ಬಹುತೇಕರು ನನ್ನ ಮೇಲೆ ನಕ್ಕಿದ್ದರು. ಆದರೆ ಇಂದು ಅದೇ ತಂಡ ಇಷ್ಟು ದೊಡ್ಡ ಮೌಲ್ಯಕ್ಕೆ ಮಾರಾಟವಾಗಿರುವುದು ಹೆಮ್ಮೆಯ ವಿಷಯ’ ಎಂದಿದ್ದಾರೆ.ಮಲ್ಯ ಏನಂದ್ರು..?ಆರ್ಸಿಬಿ ಹೊಸ ಮಾಲೀಕರಿಗೆ ನಾನು ಹೃದಯಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಐಪಿಎಲ್ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯೊಂದಿಗೆ ಅವರಿಗೆ ಶುಭವಾಗಲಿ ಮತ್ತು ಯಶಸ್ಸು ಸಿಗಲಿ. 2008ರಲ್ಲಿ ನಾನು ಈ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದಾಗ ಬಹಳಷ್ಟು ಜನರು ನಕ್ಕಿದ್ದರು ಮತ್ತು ನನ್ನ ಹೂಡಿಕೆಯನ್ನು ಕೇವಲ ಒಂದು vanity project ಎಂದು ಟೀಕಿಸಿದ್ದರು.
ನನ್ನ ಈ ಹುಚ್ಚಾಟದ ಹಿಂದೆ ‘ರಾಯಲ್ ಚಾಲೆಂಜ್’ ಬ್ರಾಂಡ್ ಕಟ್ಟುವ ಉದ್ದೇಶವಿತ್ತು. ಅದಕ್ಕಾಗಿಯೇ ಈ ಫ್ರಾಂಚೈಸಿಗೆ ಆರ್ಸಿಬಿ (RCB) ಎಂದು ಹೆಸರಿಟ್ಟಿದ್ದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆಯು ಇಂದು 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಿ ನನಗೆ ಅಪಾರ ತೃಪ್ತಿಯಾಗುತ್ತಿದೆ. ಇಂದು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಯುವ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದು ಸೇರಿದಂತೆ ಹಲವು ಅಳಿಸಲಾಗದ ನೆನಪುಗಳೊಂದಿಗೆ ಆರ್ಸಿಬಿ ಯಾವಾಗಲೂ ನನ್ನ ಡಿಎನ್ಎ ಭಾಗವಾಗಿರುತ್ತದೆ. ನನ್ನ ನೇತೃತ್ವದ ಅವಧಿಯಲ್ಲಿ ಮತ್ತು ಅದರ ನಂತರವೂ ತಂಡವನ್ನು ಬೆಂಬಲಿಸಿದ ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ದಯವಿಟ್ಟು ‘ಬೆಂಗಳೂರಿನ ಸಿಂಹ’ ಆರ್ಸಿಬಿಯನ್ನು ಹೀಗೆಯೇ ಬೆಂಬಲಿಸುವುದನ್ನು ಮುಂದುವರಿಸಿ. ನಮಸ್ಕಾರ.RCB ಫ್ರಾಂಚೈಸಿ ಸುಮಾರು ₹16,000 ಕೋಟಿಗೂ ಹೆಚ್ಚು ಮೌಲ್ಯದಲ್ಲಿ ಮಾರಾಟವಾಗಿದೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಡೀಲ್ ಎನ್ನಲಾಗಿದೆ.
ಐಪಿಎಲ್ನಲ್ಲಿ ಯಾವುದೇ ತಂಡಕ್ಕೂ ಇದುವರೆಗೆ ಇಷ್ಟೊಂದು ಮೌಲ್ಯ ಸಿಕ್ಕಿರಲಿಲ್ಲ. RCB ತಂಡವು ಆರಂಭವಾದಾಗ ಪ್ರಶಸ್ತಿ ಗೆಲ್ಲಲು ವಿಫಲವಾದರೂ, ಅದರೆ ಜನಪ್ರಿಯತೆ ಹಾಗೂ ಅಭಿಮಾಗಳ ಗೌರವ ಯಾವತ್ತೂ ಕಡಿಮೆಯಾಗಲಿಲ್ಲ. ವಿಶೇಷವಾಗಿ ವಿರಾಟ್ ಕೊಹ್ಲಿ ಅವರಂತಹ ಆಟಗಾರರೊಂದಿಗೆ ತಂಡ ದೊಡ್ಡ ಫ್ಯಾನ್ಬೇಸ್ ನಿರ್ಮಿಸಿಕೊಂಡಿತು. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೆಜ್ ಫಾಲೋ ಮಾಡಿ.
Post Comment