ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ

ಮದ್ವೆ ಬಳಿಕ 1 ತಿಂಗಳು ಕೆಲಸಕ್ಕೆ ಬಿಡುವು ತೆಗೆದುಕೊಂಡಿದ್ದ ಈ ಜೋಡಿ ಮತ್ತೆ ಕೆಲಸಕ್ಕೆ ಮರಳಿದೆ. ವಿಶೇಷ ಅಂದ್ರೆ ಒಟ್ಟಿಗೆ ಚಿತ್ರೀಕರಣದ ಸ್ಥಳಕ್ಕೆ ಬಂದಿಳಿದಿದ್ದಾರೆ. ಇಬ್ಬರೂ ಜೊತೆಯಾಗಿ ನಟಿಸುತ್ತಿರುವ 3ನೇ ಚಿತ್ರದ ಚಿತ್ರೀಕರಣಕ್ಕೆ ಒಟ್ಟಿಗೆ ಸಿನಿಮಾ ಸೆಟ್ಗೆ ಬಂದು ವಿರೋಶ್ ಜೋಡಿ ಗಮನ ಸೆಳೆದಿದೆ.
ಇದನ್ನೂ ಓದಿ: ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್Rashmika Mandanna Vijay Deverakonda Wedding`ರಣಬಾಲಿ’ (Ranabaali) ಚಿತ್ರಕ್ಕಾಗಿ ಆಂಧ್ರದ ಅನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಫಸ್ಟ್ ಶೆಡ್ಯೂಲ್ ಚಿತ್ರೀಕರಣಕ್ಕೆ ಇಬ್ಬರೂ ಮದುವೆ ಬಳಿಕ ಪ್ರಥಮವಾಗಿ ಎಂಟ್ರಿ ಕೊಟ್ರು. ತಾರಾಜೋಡಿ ಎಂಟ್ರಿ ಕೊಡುತ್ತಿದ್ದಂತೆ ಇಬ್ಬರಿಗೂ ಆರತಿ ಮಾಡಿ, ತಿಲಕವಿಟ್ಟು ಸೆಟ್ಗೆ ಕರೆಸಿಕೊಳ್ಳಲಾಯಿತು.
ಇದನ್ನೂ ಓದಿ: ಸೆಟ್ಟೇರುತ್ತಿದೆ ʻಆಪರೇಷನ್ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆRashmika Mandanna Vijay Deverakondaಚಿತ್ರತಂಡ ಹೊಸ ದಂಪತಿಗೆ ಅದ್ಧೂರಿ ಸ್ವಾಗತ ಕೋರಿದೆ. ಸಾಂಪ್ರದಾಯಿಕ ರೀತಿಯಲ್ಲಿ ಇಬ್ಬರನ್ನೂ ಸೆಟ್ನ ಒಳಗೆ ಕರೆಸಿಕೊಂಡಿದ್ದಾರೆ.
ರಣಬಾಲಿ ಇದು ರಿಯಲ್ ಸ್ಟೋರಿಯ ಸ್ಫೂರ್ತಿಯಿಂದ ತಯಾರಾಗ್ತಿರೋ ಚಿತ್ರವಾಗಿದ್ದು ಇಲ್ಲಿ ರಶ್ಮಿಕಾ ಹಾಗೂ ವಿಜಯ್ ರೆಟ್ರೋ ಸ್ಟೈಲ್ನಲ್ಲಿ ಕಾಣಿಸಿಕೊಳ್ತಾರೆ.ಇದೀಗ ತೆರೆಯ ಹಿಟ್ ಪೇರ್ ರಿಯಲ್ ಲೈಫ್ನಲ್ಲೂ ಜೊತೆಯಾಗಿರೋದ್ರಿಂದ ಒಟ್ಟಿಗೆ ಸೆಟ್ಗೆ ಆಗಮಿಸಿದ್ದಾರೆ. ಈ ಮಧುರ ಗಳಿಗೆಯನ್ನ ಚಿತ್ರತಂಡ ಇನ್ನಷ್ಟು ವಿಶೇಷವಾಗಿಸಿದೆ.
TAGGED:newlywedsRanabaaliRashmika MandannaVijay Deverakondaರಣಬಾಲಿ ಸಿನಿಮಾರಶ್ಮಿಕಾ ಮಂದಣ್ಣವಿಜಯ್ ದೇವರಕೊಂಡ
Post Comment